Sunday, April 28, 2013

ಜಾವಡಿ

ಕವಿ ಎಂದೊಡನೆ ಅವಳು ಕಿವಿ ನಿಮಿರಿದಂತಾಗಿ...
ಮನಸ್ಸಲೆಲ್ಲಾ ಜಾವಡಿಯೇ  ಆವರಿಸಿದಂತಾಗಿ...
ಅವಳ ನಿನಾದವೇ ಮನ ತುಂಬಿ ಹರಿದಂತಾಗಿ...
ತೆಗೆದುಕೊಂಡೆ ನಾ ಲೇಖನಿ ಕವಿತೆಯೊಂದ ಗೀಚಲು!!

-ಲಕ್ಷ್ಮೀಷ

Thursday, April 25, 2013

ಈಡೇರದ ಆಸೆ


ಆಸೆಗಳ ಕದನ ಶುರುವಾಯ್ತು ಮನದಿ...
ನಾ ಮೊದಲು ತಾ ಮೊದಲೆಂದು ಅವುಗಳ ಜಗಳದಿ...
ಅದಾವುದೂ ಈಡೇರಲಿಲ್ಲ ಶುದ್ಧ ಗೊಂದಲದಿ...!!

-ಲಕ್ಷ್ಮೀಷ

Monday, April 15, 2013

ಮರೆಯಲಾರೆ


ಮರೆತುಬಿಡುವೆನೆಂದೇಳಿದ ಈ ಹೃದಯ...
ಅವಳನ್ನೇ ಹೆಚ್ಚಾಗಿ ನೆನೆಯಿತು ಇಂದೆಂದಿಗಿಂತ!!
ಕಾರಣ??
ನಿಮಗೇ ತಿಳಿದಿದೆ ನನಗಿಂತ!!

-ಲಕ್ಷ್ಮೀಷ