Tuesday, May 7, 2013

ಎಣಿಸಲಾದೀತೆ?

ಅನುಭವವಿಲ್ಲದೆ ಮುಳುಗಡೆ ಮನಸ್ಸೊಂದು...
ನಿಲುಗಡೆ ಇಲ್ಲದ ತಂಗುದಾಣದಿ ಮನ ನೊಂದು...
ಈಜಲು ಬಾರದ, ಮುಂದೆ ಸಾಗಲು ಇಚ್ಚಿಸದ
ಇವರನ್ನು ಎಣಿಸುವವರಾರಿಲ್ಲಿ ಪರಮಾತ್ಮ?

-ಲಕ್ಷ್ಮೀಷ  

  

ಚೆಲುವೆ

ಮನದಲ್ಲಿ ಬಚ್ಚಿಟ್ಟ ಭಾವನೆಗಳ,
ಮೊಗದಲ್ಲಿ ತೋರುವೆ ಏಕೆ??
ಅದನರ್ಥೈಸಿಕೊಳ್ಳುವ ಶಕ್ತಿ
ಎನಗಿಲ್ಲ ಚೆಲುವೆ!!

-ಲಕ್ಷ್ಮೀಷ  



Monday, May 6, 2013

ಯಾರವಳು?

ನಾ ಬರೆವೆ, ಆಕೆಯೂ ಬರೆವಳು
ನಮ್ಮ ಬಾಳ ಪುಟದಿ...
ಗೆಳತಿಯೋ ಬಾಳಸಂಗಾತಿಯೋ
ಗೊಂದಲ ಮನದಿ...
ಜೊತೆಗಿಹಳು ಒಳಗೆ ಅವಿತು
ಎನ್ನ ಜೀವಜ್ಯೋತಿಯಾಗಿ!!
ಯಾರವಳು??

-ಲಕ್ಷ್ಮೀಷ